ಕೆಲವೊಮ್ಮೆ ಆಫೀಸ್ ನಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟವಾಗಿ ಬಿಡುತ್ತದೆ. ಆ ವಾತಾವರಣ ನಿಮಗೆ ಹಿಡಿಸದೆ ಹೋಗಬಹುದು. ಏನಿದು ಈ ಒಳ ರಾಜಕೀಯ? ಈ ಕಂಪನಿ ಬಿಟ್ಟು ಹೋಗಿ ಬಿಡುವ ಅನಿಸಿ ಬಿಡುತ್ತದೆ. ಆದರೆ ಹಾಗೆ ಅನಿಸಿದ ತಕ್ಷಣ ಕೆಲಸ ಮಾಡುತ್ತಿರುವ ಕಂಪನಿಯನ್ನು ಬಿಟ್ಟು ಹೊಸ ಕಂಪನಿಯನ್ನು ಸೇರಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ ಅಂದು ಕೊಂಡಿದ್ದೀರಾ? ಖಂಡಿತ ಇಲ್ಲ. ಏಕೆಂದರೆ ಅಲ್ಲಿ ಕೂಡ ಅಂತಹ ಪರಿಸ್ಥಿತಿ ಕಂಡು ಬರಬಹುದು.
ಜೀವನದಲ್ಲಿ ಯಶ್ವಸ್ಸು ಗಳಿಸಬೇಕೆಂದು ಬಯಸುವುದಾದರೆ ನಾವು ಕೆಲವೊಂದು ಗುಣವನ್ನು ಅಳವಡಿಸಕೊಳ್ಳಬೇಕಾಗುತ್ತದೆ. ಅದರಲ್ಲೂ ಆಫೀಸ್ ನಲ್ಲಿ ಒಳ್ಳೆಯ ರೀತಿಯಲ್ಲಿ ಗುರುತಿಸಿಕೊಳ್ಳಲು ಈ ಕೆಳಗಿನ ಗುಣಗಳನ್ನು ಅಳವಡಿಸಿಕೊಳ್ಳಲೇಬೇಕು:
ಕೆಲವು ಸಂದರ್ಭಗಳಲ್ಲಿ ಸ್ವಾರ್ಥ ಗುಣವನ್ನು ಹೊಂದಿರಬೇಕು: ತನಗೆ ಎಷ್ಟು ಸಂಬಳ ಬರಬೇಕು? ತನಗೆ ಯಾವ ಸೌಲಭ್ಯ ಸಿಗಲಿಲ್ಲ ಅದರ ಬಗ್ಗೆ ಕೇಳಬೇಕು. ಅಂತಹ ಸಂದರ್ಭದಲ್ಲಿ ನಿಮ್ಮ ಬಗ್ಗೆ ಯೋಚಿಸಬೇಕು. ಆದರೆ ಕಂಪನಿಯ ಏಳಿಗೆಯ ವಿಷಯ ಬಂದಾಗ ಸ್ವಾರ್ಥವಾಗಿ ಚಿಂತಿಸಬಾರದು.
ಗೆಳೆತನ: ಆಫೀಸ್ ನಲ್ಲಿ ಹೆಚ್ಚು ಗೆಳೆಯರನ್ನು ಮಾಡಿಕೊಳ್ಳಬಾರದು ಆದರೆ ಎಲ್ಲರ ಜೊತೆ ಚೆನ್ನಾಗಿ ವರ್ತಿಸಬೇಕು. ಏಕೆಂದರೆ ಗೆಳೆತನ ಹೆಚ್ಚಾದರೆ ಅದು ನಿಮ್ಮ ಕೆಲಸದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಆತ್ಮವಿಶ್ವಾಸ: ಮಾಡುತ್ತಿರುವ ಕೆಲಸ ಸರಿಯಾಗಿ ಬರುತ್ತದೆ ಎಂಬ ಆತ್ಮವಿಶ್ವಾಸ ಇರಬೇಕು. ನಿಮ್ಮಲ್ಲಿ ನೀವು ಮಾಡುತ್ತಿರುವ ಕೆಲಸ ಸರಿಯಿದೆ ಎಂಬ ಆತ್ಮವಿಶ್ವಾಸ ಇದ್ದರೆ ಮಾತ್ರ ನಿಮ್ಮ ಬಾಸ್ ನ ಹತ್ತಿರ ನಿಮ್ಮ ಐಡಿಯಾಗಳನ್ನು ಹೇಳಬಹುದು. ಆದ್ದರಿಂದ ಏನೇ ಮಾಡಿ, ಅದು ಸರಿಯಾಗಿ ಬರುತ್ತದೆ ಎಂಬ ಆತ್ಮವಿಶ್ವಾಸದಿಂದ ಮಾಡಿ.
ಸ್ಪರ್ಧೆ: ನಿಮ್ಮಲ್ಲಿ ಸ್ಪರ್ಧೆ ಮನೋಭಾವ ಇರಬೇಕು, ಆದರೆ ಹೊಟ್ಟೆಕಿಚ್ಚು ಇರಬಾರದು . ಇಷ್ಟು ಗುಣಗಳು ನಿಮ್ಮಲ್ಲಿ ಇದ್ದರೆ ಎಲ್ಲಿ ಹೋದರೂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡಿಕೊಂಡು ಬರಬಹುದು.
No comments:
Post a Comment