ನೋಡಿದೆ ನಾನೊಂದು ಬಣ್ಣದ ಚಿಟ್ಟೆ
ಅದನ್ನೇ ಹಿಡಿಯಲು ಆಸೆ ಪಟ್ಟೆ
ಒಂದು ದಿನ ಮಾತನಾಡಿಸಿ ನಾ ಬಿಟ್ಟ
ಮಾತನಾಡಿಸಿದ ಮೇಲೆ ಇಷ್ಟ ಪಟ್ಟೆ
ಅದರಲ್ಲೇ ನನ್ನ ಜೀವ ಇಟ್ಟೆ
ಅದರಹಿಂದೆ ಹೋಗಿ ತುಂಬಾ ಕಷ್ಟ ಪಟ್ಟೆ
ಪಾಪ ಅದಕ್ಕೂ ತುಂಬಾ ಕಷ್ಟ ಕೊಟ್ಟೆ
ಮನಸಲ್ಲೇ ಅದನ್ನ ಬಚ್ಚಿಟ್ಟೆ
ನನ್ನುಸಿರೇ ಅದು ಎಂದು ಬಿಟ್ಟೆ
ಅದರಲ್ಲೇ ಹೃದಯಾನ ಒತ್ತಿಟ್ಟೆ
ತಿಳಿದು ನಾನು ಜಾರಿ ಬಿಟ್ಟೆ
ಜಾರಿದಾಗ ಮನಸ್ಸಿಗಾದ ಗಾಯ ಮುಚ್ಚಿಟ್ಟೆ
ಒಬ್ಬರೆದರು ಮಾತ್ರ ನೋವು ಬಿಚ್ಚಿಟ್ಟೆ
ಆಗ ತಿಳಿಯಿತು ಅದೊಂದು ಹಾರುವ ಚಿಟ್ಟೆ
ತಿಳಿದಾಗ ತುಂಬಾ ತುಂಬಾ ದುಃಖ ಪಟ್ಟೆ
ಹಾಗೋ ಹೀಗೋ ಅದನ್ನ ಮರೆತು ಬಿಟ್ಟೆ
ಇಂತಿ ನಿನ್ನ ಬೇಡವಾದ ಚಿಟ್ಟೆ
-- ಮಹೇಶ್ವರ ರೆಡ್ಡಿ ಒಂಕಾರಂ
Tuesday, June 29, 2010
Subscribe to:
Post Comments (Atom)
No comments:
Post a Comment