Social Icons

Thursday, September 08, 2011

2075ರ ಆಕಾಶವಾಣಿ, ವಾರ್ತೆ ಓದುತ್ತಿರುವವರು ಕಾಮಿಣಿ !!!

ಈಗ ಸಮಯ ಸಂಜೆ 5 ಗಂಟೆ 5 ನಿಮಿಷ, ವಾರ್ತೆಗಳನ್ನು ಓದುತ್ತಿರುವವರು ಕಲ್ಲತ್ತಗಿರಿ ಕಾಮಿಣಿ.

ಮುಂಬೈ ಸ್ಪೋಟದ ಪ್ರಮುಖ ಆರೋಪಿ ಅಜ್ಮಲ್ ಕಸಬ್ ಮುಂಬೈ ಅರ್ಥರ್ ರಸ್ತೆಯ ಜೈಲಿನಲ್ಲಿ ನಿಧನ ಹೊಂದಿದ್ದಾನೆ. ಆತನಿಗೆ 95 ವರ್ಷ ವಯಸಾಗಿತ್ತು. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಮುಖಂಡರು ಕಸಬ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ವೀರ ಮರಣವನ್ನಪ್ಪಿದ ಕಸಬ್ ಸ್ಮರಣಾರ್ಥ ಪಾಕ್ ಸರಕಾರ ನಾಳೆ ರಾಷ್ಟ್ರೀಯ ರಜೆ ಘೋಷಿಸಿದೆ.

2G ಸ್ಪೆಕ್ಟ್ರಂ ಹಗರಣದ ಪ್ರಮುಖ ಆರೋಪಿಯಾಗಿದ್ದ ಎ ರಾಜಾ ಅವರ ಮೊಮ್ಮಗ ಎ ಭೋಜಾ ಅವರ ಮೇಲೆ 16G ಸ್ಪೆಕ್ಟ್ರಂ ಹಗರಣದ ಪ್ರಮುಖ ಆರೋಪಿಯಾಗಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಎ ಭೋಜಾ ಅವರನ್ನು ಯಾವುದೇ ಕ್ಷಣದಲ್ಲಿ, ಅಂದರೆ ಒಂದೆರಡು ವರ್ಷದೊಳಗೆ ಬಂಧಿಸುವ ಸಾಧ್ಯತೆ ಇದೆ.

ಕಾವೇರಿ ನದಿ ವಿವಾದವನ್ನು ತಮಿಳುನಾಡು ಮತ್ತು ಕರ್ನಾಟಕ ಸರಕಾರ ಮಾತುಕತೆ ಮೂಲಕ ಪರಿಹರಿಸಬೇಕೆಂದು ಕೇಂದ್ರ ಸರಕಾರ ಸೂಚನೆ ನೀಡಿದೆ. ಈ ಸಂಬಂಧ ಕಾವೇರಿ ನದಿ ಪ್ರಾಧಿಕಾರಕ್ಕೆ ಹೊಸ ರೂಪ ಕೊಡಲಾಗುವುದಾಗಿ ಮಾನವ ಸಂಪನ್ಮೂಲ ಖಾತೆ ತಿಳಿಸಿದೆ. ವಾರ್ತೆಗಳು ಮುಂದುವರಿಯುತ್ತವೆ..

No comments:

Post a Comment

Related Posts Plugin for WordPress, Blogger...