Social Icons

Friday, September 09, 2011

ಮತ್ತೊಮ್ಮೆ ಆಕಾಶವಾಣಿ ವಾರ್ತೆಗಳಿಗೆ ಸ್ವಾಗತ

ನೆರೆಯ ಎರಡು ರಾಜ್ಯಗಳು ಬೆಂಗಳೂರು ಮಹಾನಗರವನ್ನು ತನ್ನ ಎರಡನೇ ರಾಜಧಾನಿಯಾಗಿ ಘೋಷಿಸಿವೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕ ಸರಕಾರ ಈ ಸಂಬಂಧ ಅಸೆಂಬ್ಲಿಯಲ್ಲಿ ನಿಲುವಳಿ ಗೊತ್ತುವಳಿ ಮಂಡಿಸಿದ್ದು, ಎಲ್ಲಾ ಪಕ್ಷದ ಮುಖಂಡರ ಜೊತೆ ದೆಹಲಿಗೆ ತೆರಳಿ ಮನವಿ ಸಲ್ಲಿಸಲು ಸರಕಾರ ನಿರ್ಧರಿಸಿದೆ.

ಮುಂಬೈ ಮಹಾನಗರದ ಪ್ರಮುಖ ಬೀದಿಯೊಂದರಲ್ಲಿ ಯುವತಿಯೊಬ್ಬಳು ಹಾಡುಹಗಲೇ ಯಾವುದೇ ತೊಂದರೆ ಇಲ್ಲದೆ 50 ಮೀಟರ್ ದೂರವಿರುವ ತನ್ನ ಮನೆ ಸೇರಿ ಕೊಂಡಿದ್ದಾಳೆ.

ಐಪಿಎಲ್ ನ 76ನೇ ಟೀಮ್ ಆಗಿ ಲಕ್ಷದ್ವೀಪ್ ಕ್ಯಾಟ್ಸ್ ಸೇರ್ಪಡೆಯಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆ ನೀಡಿದೆ. ಅದಕ್ಕೆ ಖ್ಯಾತ ಆಟಗಾರ ಅರ್ಜುನ್ ತೆಂಡೂಲ್ಕರ್ ಅವರ ಮಗ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ವಿಶ್ವಕಪ್ ಕ್ರಿಕೆಟಿಗೆ ಆಯ್ಕೆಯಾದ 16 ತಂಡದ ಸದಸ್ಯರು ತಮ್ತಮ್ಮ ಮಡದಿಯರ ಜೊತೆ ಒಬ್ಬಳು ಗರ್ಲ್ ಫ್ರೆಂಡ್ ಮತ್ತು ವಿವಾಹೇತರ ಕ್ರಿಕೆಟಿಗರು ಗರ್ಲ್ ಫ್ರೆಂಡ್ ಜೊತೆ ಇನ್ನೊಬ್ಬಳನ್ನು ಜೊತೆ ಕರೆದುಕೊಂಡು ಹೋಗಲು ಬಿಸಿಸಿಐ ಅನುಮತಿ ನೀಡಿದೆ.

ಹಳೆಯ ಜನಪ್ರಿಯ ಕನ್ನಡ ಚಿತ್ರಗಳನ್ನು ಇಂಗ್ಲಿಷ್ ಭಾಷೆಯಲ್ಲಿ ನಿರ್ಮಿಸಲು ಚಲನಚಿತ್ರ ಮಂಡಳಿ ತಾತ್ವಿಕ ಒಪ್ಪಿಗೆ ನೀಡಿದೆ. ಆ ಚಿತ್ರಗಳೆಂದರೆ.. ಅವ್ವ ಚಿತ್ರವನ್ನು ದಿ ಮುಮ್ಮಿ 4, ನಾಗರಹಾವು ಚಿತ್ರವನ್ನು ಅನಕೊಂಡ 5, ಕರಿಯ ಚಿತ್ರವನ್ನು ಮೆನ್ ಇನ್ ಬ್ಲ್ಯಾಕ್ 2 ಮತ್ತು ಭಕ್ತ ಕುಂಬಾರ ಚಿತ್ರವನ್ನು ಹ್ಯಾರಿ ಪಾಟರ್ 9.

ಇಲ್ಲಿಗೆ ವಾರ್ತಾ ಪ್ರಸಾರ ಮುಕ್ತಾಯವಾಯಿತು. ಮುಂದಿನ ಕಾರ್ಯಕ್ರಮ ಶಿವಾಜಿ ಗಣೇಶನ್ ಅಭಿನಯದ ಹಳೆಯ ಸೂಪರ್ ಹಿಟ್ ತಮಿಳು ಗೀತೆಗಳು.

No comments:

Post a Comment

Related Posts Plugin for WordPress, Blogger...